Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಇದು ಸಂಗೀತ ಲೋಕದ ಅಭಿಯಾನ.
Posted date: 26/November/2008

ಕನ್ನಡ ನೆಲದಲ್ಲಿ ಕನ್ನಡಿಗರೇ ಅರಂಭಿಸಿದ ಪ್ರಪ್ರಥಮ ವಾಹಿನಿ ’ಕಸ್ತೂರಿ’ ಪ್ರಸಾರ ಆರಂಭಿಸಿದ ಅಲ್ಪ ಅವಧಿಯಲ್ಲಿಯೇ ಕನ್ನಡಿಗರ ಮನ ಗೆದ್ದಿದೆ. ವೈವಿಧ್ಯಮಯ ಕಾರ್ಯಕ್ರಮಗಳಿಂದ ಜನರಿಗೆ ಹತ್ತಿರವಾಗಿರುವ ’ಕಸ್ತೂರಿ’ ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತ ಯಶಸ್ಸಿನತ್ತ ದಾಪುಗಾಲು ಹಾಕುತ್ತಿದೆ. ಮನರಂಜನೆಯೇ ಪ್ರಮುಖ ಉದ್ದೇಶವಾದರೂ, ಜನತೆಗೆ ನಿಖರ ಮಾಹಿತಿಯನ್ನು ನೀಡುತ್ತಾ ಬರುತ್ತಿರುವುದು ಕಸ್ತೂರಿಯ ಹೆಜ್ಜೆ ಗುರುತು.

ಕಸ್ತೂರಿ ಕನ್ನಡವಾಹಿನಿಯು, ಕನ್ನಡ ಸಾರಸ್ವತ ಲೋಕಕ್ಕೆ ರಾಜೋತ್ಸವ ಹಾಗೂ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿರುವ ಈ ಶುಭ ಸಂದರ್ಭದಲ್ಲಿ ವಿಭಿನ್ನ ಹಾಗೂ ವಿನೂತನ ಕಾರ್ಯಕ್ರಮವಾದ ಕನ್ನಡವೇ ಸತ್ಯ ಕನ್ನಡವೇ ನಿತ್ಯವನ್ನ ಹೆಮ್ಮೆಯ ಕಾಣಿಕೆಯಾಗಿ ನೀಡುತ್ತಿದೆ.

ಈ ಅಪೂರ್ವವಾದ ಕನ್ನಡವೇ ಸತ್ಯ ಕನ್ನಡವೇ ನಿತ್ಯಗಾನ ಸ್ಪರ್ಧೆಯು ಇದೇ ತಿಂಗಳ ನವಂಬರ್ ೨೯ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ ೮:೩೦ ರಿಂದ ೯:೩೦ ರವರೆಗೂ ಪ್ರಸಾರವಾಗಲಿದೆ. ಈಗಾಗಲೇ ’ಕಸ್ತೂರಿ’ ತೆರೆಯ ಮೇಲೆ ಮೂಡಿದ್ದ ಸಪ್ತ ಸ್ವರ-೨ ಕಾರ್ಯಕ್ರಮವು ಜನಮನ್ನಣೆಗೆ ಪಾತ್ರವಾಗಿತ್ತು. ಈ ಸ್ಪರ್ಧೆಯಲ್ಲಿ ೧೮ ರಿಂದ ೩೫ ವರ್ಷ ವಯೋಮಿತಿಯವರು ಭಾಗವಹಿಸುತ್ತಿದ್ದಾರೆ. ಈ ಸ್ಪರ್ಧೆಗೆ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಧ್ವನಿ ಪರೀಕ್ಷೆ ನಡೆಸಿ ೩೨ ಗಾಯಕರನ್ನು ಆರಿಸಲಾಗಿದೆ. ಈ ಸ್ಪರ್ಧೆಯಲ್ಲಿ ೫ ಸುತ್ತುಗಳನ್ನು ಏರ್ಪಡಿಸಿದ್ದು, ಅವುಗಳು

೧)ಭಕ್ತಿಗೀತೆ ಸುತ್ತು.

೨)ಭಾವಗೀತೆ ಸುತ್ತು.

೩)ಜನಪದ ಗೀತೆ ಸುತ್ತು.

೪)ರಂಗ ಗೀತೆ ಸುತ್ತು.

೫)ಚಿತ್ರಗೀತೆ ಸುತ್ತು.

ಆಯ್ಕೆಯಾದ ೩೨ ಗಾಯಕ/ಗಾಯಕಿಯರಲ್ಲಿ ೪ ಸ್ಪರ್ಧಿಗಳು ಪ್ರತಿ ೨ ಸಂಚಿಕೆಗಳಲ್ಲಿ ಸಂಗೀತದ ಐದೂ ಪ್ರಕಾರಗಳನ್ನು ಹಾಡುತ್ತಾರೆ. ಎರಡನೇ ಸಂಚಿಕೆಯ ಮುಕ್ತಾಯದಲ್ಲಿ ತೀರ್ಪುಗಾರರು ಇಬ್ಬರನ್ನು ಮುಂದಿನ ಸುತ್ತಿಗೆ ಆಯ್ಕೆ ಮಾಡಿ ಉಳಿದಿಬ್ಬರನ್ನು ಹೊರಗುಳಿಸುತ್ತಾರೆ.ರೇಡಿಯೋ ಮಿರ್ಚಿಯ ಆರ್.ಜೆ. ರಚನಾ ಅವರು ಈ ಕಾರ್ಯಕ್ರಮದ ನಿರೂಪಕಿಯಾಗಿದ್ದು, ಖ್ಯಾತ ಮ್ಯಾಂಡೋಲಿನ್ ವಾದಕ/ಸಂಗೀತ ನಿರ್ದೇಶಕ ಎನ್.ಎಸ್. ಪ್ರಸಾದ್ ರವರು ಈ ೫ ಸುತ್ತುಗಳ ಸ್ಪರ್ಧೆಗೂ ತೀರ್ಪುಗಾರರಾಗಿದ್ದು, ಇವರೊಂದಿಗೆ ಶ್ರೀನರಸಿಂಹ ನಾಯಕ್, ಶ್ರೀಮತಿ ರತ್ನಮಾಲಾ ಪ್ರಕಾಶ್, ಯಶವಂತ ಹಳಿಬಂಡಿ, ಶ್ರೀ ಜರ್ನಾಧನ್ ಸಹ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕನ್ನಡವೇ ಸತ್ಯ ಕನ್ನಡವೇ ನಿತ್ಯ ಇದು ಸಂಗೀತ ಲೋಕದ ಅಭಿಯಾನ. - Chitratara.com
Copyright 2009 chitratara.com Reproduction is forbidden unless authorized. All rights reserved.